ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ.
ಈ ಅಕ್ಷರಗಳನ್ನು ಮುಖ್ಯವಾಗಿ ಸ್ವರಗಳು,ಯೋಗವಾಹಗಳು ಮತ್ತು ವ್ಯಂಜನಗಳೆಂದು ಮೂರು ಗುಂಪದಲ್ಲಿ ವಿಂಗಡಿಸಲಾಗಿದೆ.
ಸ್ವರಗಳು
ಸ್ವತಂತ್ರವಾಗಿ ಉಚ್ಚರಿಸಲಾಗುವ ಅಕ್ಷರಗಳು ಹೆಸರುಗಳು ಎಂದು ಕರೆಯುತ್ತಾರೆ.
ಅ, ಆ, ಇ, ಈ, ಉ, ಊ, ಋ, ಎ, ಏ, ಐ, ಒ, ಓ, ಔ
ಸ್ವರಗಳಲ್ಲಿ ಎರಡು ವಿಧಗಳು
1. ಹ್ರಸ್ವಸರ
2. ದೀರ್ಘ ಸ್ವರ
ಹ್ರಸ್ವಸರ
ಒಂದೇ ಮಾತ್ರಾಕಾಲದಲ್ಲಿ ಉಚ್ಚರಿಸುವ ಸ್ವರಗಳನ್ನು ಹ್ರಸ್ವಸರ ಎಂದು ಕರೆಯುತ್ತಾರೆ.
ಉದಾ.- ಅ, ಇ, ಉ , ಋ, ಎ, ಒ .
ದೀರ್ಘ ಸ್ವರ
ಎರಡು ಮಾತ್ರಾಕಾಲದಲ್ಲಿ ಉಚ್ಛರಿಸುವ ಸ್ವರಗಳನ್ನು ದೀರ್ಘ ಸ್ವರಗಳು ಎನ್ನುತ್ತಾರೆ.
ಉದಾ- ಆ, ಈ, ಊ, ಏ, ಐ, ಓ, ಔ.
ಯೋಗವಾಹಗಳು
ಯೋಗವಾಹಗಳನ್ನು ಸ್ವತಂತ್ರವಾಗಿ ಉಚ್ಚರಿಸಲಾಗುವುದಿಲ್ಲ ಬೇರೊಂದು ಅಕ್ಷರದ ಸಂಬಂಧವನ್ನು ಬಂದಾಗ ಯೋಗವಾಹಗಳನ್ನು ಉಚ್ಛರಿಸಲಾಗುತ್ತದೆ.
ಯೋಗವಾಹಗಳಲ್ಲಿ ಎರಡು ವಿಧಗಳಿವೆ.
ಅನುಸ್ವಾರ ಮತ್ತು ವಿಸರ್ಗಗಳು.
ಅನುಸ್ವಾರ (o) ಅಂ
ವಿಸರ್ಗ (:)
ವಿಸರ್ಗವನ್ನು ಸಂಸ್ಕೃತ ಪದಗಳಲ್ಲಿ ನಡುವೆ ಅಥವಾ ಕೊನೆಯಲ್ಲಿ ಬಳಸಲಾಗುವುದು.
ಉದಾ. - ಪುನಃ, ದುಃಖ
ವ್ಯಂಜನಗಳು
ಸ್ವರದ ಸಹಾಯದಿಂದ ಉಚ್ಚರಿಸಲಾಗುವ ಅಕ್ಷರ ಗಳನ್ನು ವ್ಯಂಜನಗಳು ಎನ್ನುತ್ತಾರೆ
ವ್ಯಂಜನಗಳಲ್ಲಿ ಮುಖ್ಯವಾಗಿ ಎರಡು ಗುಂಪುಗಳಿವೆ.
1. ವರ್ಗೀಯ ವ್ಯಂಜನ.
2. ಅವರ್ಗೀಯ ವ್ಯಂಜನ
ವರ್ಗೀಯ ವ್ಯಂಜನಗಳು
ವರ್ಗೀಯ ವ್ಯಂಜನಗಳನ್ನು ಐದು ಗುಂಪುಗಳಲ್ಲಿ ವಿಂಗಡಿಸಲಾಗಿದೆ ಪ್ರತಿ ವರ್ಗದಲ್ಲಿ 5 ವ್ಯಂಜನಗಳಿರುತ್ತವೆ. ಪ್ರತಿ ವರ್ಗದ ಒಂದನೆಯ ಮತ್ತು ಮೂರನೆಯ ವ್ಯಂಜನವು ಅಲ್ಪಪ್ರಾಣ ವ್ಯಂಜನ ಆಗಿರುತ್ತದೆ. ಎರಡನೆಯ ಮತ್ತು ನಾಲ್ಕನೆಯ ವ್ಯಂಜನವು ಮಹಾಪ್ರಾಣ ವ್ಯಂಜನ ಆಗಿರುತ್ತದೆ. ಪ್ರತಿ ವರ್ಗದ ಐದನೆಯ ವ್ಯಂಜನವು ಅನುನಾಸಿಕವಾಗಿರುತ್ತದೆ.
ಕ ವರ್ಗ - ಕ ಖ ಗ ಘ ಙ
ಚ ವರ್ಗ - ಚ ಛ ಜ ಝ ಞ
ಟ ವರ್ಗ - ಟ ಠ ಡ ಢ ಣ
ತ ವರ್ಗ - ತ ಥ ದ ಧ ನ
ಪ ವರ್ಗ - ಪ ಫ ಬ ಭ ಮ
ಅವರ್ಗಿಯ ವ್ಯಂಜನಗಳು
ಯ, ರ ,ಲ ,ವ, ಶ, ಷ, ಸ, ಹ ,ಳ.
ಅಲ್ಪಪ್ರಾಣ ,ಮಹಾಪ್ರಾಣಗಳು ಮತ್ತು ಅನುನಾಸಿಕಗಳು
ಅಲ್ಪಪ್ರಾಣ
ಪ್ರಾಣ ಎಂದರೆ ಉಸಿರು ಅಲ್ಪ ಪ್ರಾಣ ಅಕ್ಷರಗಳನ್ನು ಉಚ್ಚರಿಸಲು ಅಲ್ಪ ಉಸಿರು ಸಾಕು. ಅದಕ್ಕೆ ಈ ವ್ಯಂಜನಾಕ್ಷರಗಳನ್ನು ಅಲ್ಪಪ್ರಾಣ ಎಂದು ಕರೆಯುತ್ತಾರೆ.
ಉದಾಹರಣೆ - ಕ, ಗ
ಚ, ಜ
ಟ, ಡ
ತ, ದ
ಪ, ಬ
ಮಹಾಪ್ರಾಣ
ಮಹಾಪ್ರಾಣಗಳು ಈ ಅಕ್ಷರಗಳನ್ನು ಉತ್ತರಿಸಲು ಹೆಚ್ಚು ಉಸಿರು ಬೇಕು ಅದಕ್ಕಾಗಿ ಈ ಅಕ್ಷರಗಳನ್ನು ಮಹಾಪ್ರಾಣ ಎಂದು ಕರೆಯುತ್ತಾರೆ.
ಉದಾಹರಣೆ
ಖ, ಘ
ಛ, ಝ
ಠ, ಢ
ಥ, ಧ
ಫ, ಭ
ಅನುನಾಸಿಕಗಳು
ಮೂಗಿನ ಸಹಾಯದಿಂದ ಉಚ್ಚರಿಸಬೇಕಾದ ವ್ಯಂಜನಾಕ್ಷರಗಳನ್ನು ಅನುನಾಸಿಕಗಳು ಎನ್ನುತ್ತಾರೆ.
ಉದಾ.
ಙ,ಞ,ಣ,ನ,ಮ
ಗುಣಿತಾಕ್ಷರ ಮತ್ತು ಸಂಯುಕ್ತಾಕ್ಷರಗಳು (ಒತ್ತಕ್ಷರ)
ಗುಣಿತಾಕ್ಷರಗಳು
ವ್ಯಂಜನಗಳಿಗೆ ಸ್ವರಾಕ್ಷರ ಸೇರಿದಾಗ ಗುಣಿತಾಕ್ಷರವಾಗುತ್ತದೆ.
ಉದಾಹರಣೆಗಳು
ಕ್ + ಅ = ಕ
ಕ್ + ಆ = ಕಾ
ಗ್ + ಎ = ಗೆ
ತ್ + ಊ = ತೂ
ಪ್ + ಈ = ಪೀ
ಸಂಯುಕ್ತಾಕ್ಷರಗಳು (ಒತ್ತಕ್ಷರ)
ಒಂದಕ್ಕಿಂತ ಹೆಚ್ಚು ವ್ಯಂಜನಗಳು ಸೇರಿ ನಂತರ ಸ್ವರಾಕ್ಷರ ಸೇರಿದರೆ. ಆ ಅಕ್ಷರಗಳನ್ನು ಸಂಯುಕ್ತಾಕ್ಷರ ಎನ್ನುತಾರೆ.
ಕ್ಷ = ಕ್ +ಷ್ +ಅ
ಜ್ಞ = ದ್+ ನ್+ ಯ್+ ಅ
ಕ್ತು = ಕ್ + ತ್ + ಉ
ಜ್ಜಿ = ಜ್ + ಜ್ + ಇ
ತ್ನ = ತ್ + ನ್ + ಒ
ತ್ವ = ತ್ + ವ್ + ಅ
ಚ್ಚೆ = ಚ್ + ಚ್ + ಎ
ಸಂಯುಕ್ತಾಕ್ಷರಗಳ ವಿಧಗಳು
ಸಂಯುಕ್ತಾಕ್ಷರಗಳಲ್ಲಿ (ಒತ್ತಕ್ಷರಗಳಲ್ಲಿ ಸಜಾತೀಯ ಸಂಯುಕ್ತಾಕ್ಷರ ಮತ್ತು ವಿಜಾತೀಯ ಸಂಯುಕ್ತಾಕ್ಷರ ಎಂಬ ಎರಡು ವಿಧಗಳಿವೆ.
ಸಜಾತಿಯ ಸಂಯುಕ್ತಾಕ್ಷರ
ಒಂದೇ ಜಾತಿಯ ಎರಡು ವ್ಯಂಜನಗಳು ಸೇರಿದಾಗ ಆ ಸಂಯುಕ್ತಾಕ್ಷರವನ್ನು ಸಜಾತಿಯ ಸಂಯುಕ್ತಾಕ್ಷರ ಎನ್ನುತ್ತಾರೆ.
ಕ್ಕ = ಕ್+ ಕ್ +ಅ
(ಈ ಉದಾಹರಣೆಯಲ್ಲಿ 'ಕ' ಈ ಒಂದೇ ಜಾತಿಯ ವ್ಯಂಜನವು ಎರಡು ಬಾರಿ ಸೇರುವುದರಿಂದ ಈ ಸಂಯುಕ್ತಾಕ್ಷರು ಸಜಾತಿಯ ಸಂಯುಕ್ತಾಕ್ಷರವಾಗಿದೆ)
ಟ್ಟು = ಟ್ +ಟ್+ ಈ
ಜ್ಜೊ = ಜ್ +ಜ್ +ಒ
ದ್ದೂ = ದ್ +ದ್ +ಊ
ಚ್ಚಾ= ಚ್+ ಚ್ + ಆ
ವಿಜಾತಿಯ ಸಂಯುಕ್ತಾಕ್ಷರ
ಬೇರೆ ಬೇರೆ ಜಾತಿಯ ಎರಡು ಅಥವಾ ಹೆಚ್ಚು ವ್ಯಂಜನಗಳು ಸೇರಿದಾಗ ಅದನ್ನು ವಿಜಾತಿಯ ಸಂಯುಕ್ತಾಕ್ಷರ ಎನ್ನುತ್ತಾರೆ.
ತ್ವ - ತ್ +ವ್+ ಒ
(ಈ ಉದಾಹರಣೆಯಲ್ಲಿ ತ ಮತ್ತು ವ ಈ ಬೇರೆ ಬೇರೆ ಜಾತಿಯ ವ್ಯಂಜನಗಳು ಸೇರುವದರಿಂದ ಇದು ವಿಜಾತಿಯ ಸಂಯುಕ್ತಾಕ್ಷರವಾಗಿದೆ.)
ಪ್ರೀ - ಪ್+ ದ್+ ಈ
ತ್ನೂ - ತ್+ ನ್+ ಊ
ತ್ಯೇ - ತ್+ ತ್+ ಏ
ಪ್ತಾ - ಪ್ +ತ್ +ಆ
ಸಂಕ್ಷಿಪ್ತದಲ್ಲಿ ವರ್ಣಮಾಲೆ
ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ವರ್ಣಗಳಿವೆ.
ಸ್ವರಗಳು - 13
ಯೋಗವಾಹಗಳು - 02
ವ್ಯಂಜನಗಳು - 34
ಒಟ್ಟು - 49
ಸ್ವರಗಳು
ಹ್ರಸ್ವ ಸ್ವರ - 06
ದೀರ್ಘಸ್ವರ. - 07
ಒಟ್ಟು. - 13
ಯೋಗವಾಹಗಳು (02)
ಅನುಸ್ವಾರ - ಅಂ
ವಿಸರ್ಗ - ಅ:
ವ್ಯಂಜನಗಳು (34)
ವರ್ಗೀಯ - 25
ಅವರ್ಗೀಯ - 09
ಒಟ್ಟು - 34
ವರ್ಗಿಯ ವ್ಯಂಜನಗಳು (25)
ಅಲ್ಪಪ್ರಾಣ -- 10
ಮಹಾಪ್ರಾಣ – 10
ಅನುನಾಸಿಕ – 05
ಒಟ್ಟು – 25
ಅವರ್ಗೀಯ ವ್ಯಂಜನಗಳು (09)
0 Comments