ನಾಮಪದ
ವ್ಯಕ್ತಿ, ವಸ್ತು, ಸ್ಥಳ, ಪ್ರಾಣಿ, ಪಕ್ಷಿಗಳ ಹಾಗೂ ಕಲ್ಪನೆಗಳ ಹೆಸರುಗಳನ್ನು ಸೂಚಿಸುವ ಪದಗಳಿಗೆ ನಾಮಪದ ಎನ್ನುವುದು.ಅದೆರೀತಿ ತೂಕ,ಅಳತೆ,ಗುಣ ಮುಂತಾದವುಗಳ ಹೆಸರುಗಳನ್ನು ಸೂಚಿಸುವ ಪದಗಳನ್ನು ನಾಮಪದ ಎನ್ನುತ್ತಾರೆ.
ಉದಾ:- ರಾಮ, ಸೀತಾ , ಮಂಗಳೂರು , ಬೆಳಗಾವಿ, ನವಿಲು, ಎಮ್ಮೆ ,ಹುಲಿ, ಸಂತೋಷ, ದುಃಖ ಇತ್ಯಾದಿ
ಈ ನಮಪಗಳನ್ನು ಮೂರು ವಿಧಗಳಲ್ಲಿ ವಿಂಗಡಿಸಲಾಗಿದೆ.
1.ರೂಢನಾಮ
2.ಅಂಕಿತನಾಮ
3.ಅನ್ವರ್ಥನಾಮ
ಸಮಾನಾರ್ಥಕ ಪದಗಳು
ವಿರುದ್ಧಾರ್ಥಕ ಪದಗಳು
1.ರೂಢನಾಮ
ರೂಢಿಯಿಂದ ಬಂದ ಹೆಸರುಗಳಿಗೆ (ನಾಮಪದಗಳಿಗೆ) ರೂಢನಾಮ ಎನ್ನುವುರು.
ನಾವು ಪ್ರಾಚೀನ (ಹಳೆ) ಕಾಲದಿಂದ ರೂಢಿಯಾಗಿ ಬಳಸುತ್ತಿರುವ ಹೆಸರುಗಳನ್ನು ರೂಢ ನಾಮ ಎನ್ನುತ್ತಾರೆ.
ಉದಾಹರಣೆಗಳು
ನದಿ,
ಪರ್ವತ,
ಸಮುದ್ರ,
ದೇಶ,
ಗಿಡ,
ಬಾಗಿಲು,
ಪ್ರಾಣಿ,
ಪಕ್ಷಿ ,
ಹಾಡು,
ಹುಡುಗ,
ಊರು,
ನಗರ ,
ಶಿಶು,
ಹೆಂಗಸು ,
ಬಾಲಕ ಮುಂತಾದವು.
2.ಅಂಕಿತನಾಮ
ಗುರುತಿಗಾಗಿ ಹಾಗೂ ವ್ಯವಹಾರದ ಉಪಯೋಗಕ್ಕಾಗಿ ಇಟ್ಟು ಕೊಂಡಿರುವ ಅಥವಾ ಕೊಟ್ಟಿರುವ ಹೆಸರುಗಳಿಗೆ ಅಂಕಿತ ನಾಮ ಎನ್ನುತ್ತಾರೆ.
ದೇಶಗಳ ಹೆಸರು -
ಭಾರತ,
ರಶಿಯಾ,
ಚೀನಾ…
ನದಿಗಳ ಹೆಸರು -
ಗಂಗಾ,
ಕಾವೇರಿ,
ಬ್ರಹ್ಮಪುತ್ರ….
ವ್ಯಕ್ತಿಗಳ ಹೆಸರು -
ಮಹೇಶ,
ಲಕ್ಷ್ಮೀ,
ಬಸವೇಶ್ವರ….
ಅನ್ವರ್ಥ ನಾಮ
ರೂಪ, ಗುಣ , ವೃತ್ತಿ , ಸ್ವಭಾವಾದಿ ಮುಂತಾದ ವಿಶೇಷವಾದ ಆರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರಗಳಿಗೆ ಅನ್ವರ್ಥ ನಾಮ ಎನ್ನುತ್ತಾರೆ.
ಉದಾಹರಣೆಗಳು
ಕುರುಡ
ಕುಂಟ
ಪಂಡಿತ
ವಿದ್ಯಾರ್ಥಿ
ರೋಗಿ
ಪೂಜಾರಿ
ವ್ಯಾಪಾರಿ
ಶಿಕ್ಷಕ
ವೈದ್ಯ
ಬಳೆಗಾರ
ಸೇವಕ
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1.ನಾಮಪದ ಎಂದರೇನು?
2.ನಾಮಪದಗಳಲ್ಲಿ ಎಷ್ಟು ವಿಧಗಳಿವೆ?
3.ರೂಢನಾಮ ಎಂದರೇನು?
4.ಅನ್ವರ್ಥನಾಮ ಎಂದರೇನು?
5.ಅನ್ವರ್ಥನಾಮ ಎಂದರೇನು?
ನಾಮಪದದ ಈ ವಿಧಗಳನ್ನು ಗುರುತಿಸುವುದು ಹೇಗೆ?
ನಾವು ಹಳೆ ಕಾಲದಿಂದ ಬಳಸುತ್ತಿರುವ ವಾಚಕಗಳು ಅಥವಾ ಹೆಸರುಗಳು ಎಂದರೆ ರೂಢನಾಮ.
ನದಿ ,ಪರ್ವತ ,ಮಕ್ಕಳು ,ಹುಡುಗ ಹುಡುಗಿ, ಮನೆ ,ಊರು, ನಿಸರ್ಗ, ಶಿಕ್ಷಣ ಇತ್ಯಾದಿ.
ವ್ಯವಹಾರದ ಉಪಯೋಗಕ್ಕಾಗಿ ಇಟ್ಟುಕೊಂಡಿದ್ದ ಹೆಸರುಗಳಿವೆ ಅಂಕಿತನಾಮಗಳು.
ಬಸವೇಶ್ವರ, ಕೂಡಲಸಂಗಮದೇವ, ಭಾರತ ಕರ್ನಾಟಕ, ಬೆನಾಡಿ, ಮಂಗಳೂರು, ಬೆಂಗಳೂರು, ಅದೇ ರೀತಿ ನಮ್ಮೆಲ್ಲರ ಹೆಸರುಗಳು ಮಹೇಶ, ಸುರೇಶ, ಅಂಕಿತಾ, ಸಮೀಕ್ಷ, ಸುರೇಖಾ, ಕಿರಣ.....
ವ್ಯಕ್ತಿಗಳಲ್ಲಿರುವ ಗುಣ, ದೋಷ ಅವರ ವೃತ್ತಿ ನೋಡಿ ಅವರಿಗೆ ನೀಡಿರುವ ಹೆಸರುಗಳೇ ಅನ್ವರ್ಥನಾಮಗಳು.
ವಿದ್ಯಾರ್ಥಿ, ಶಿಕ್ಷಕ, ಶಿಕ್ಷಕಿ, ವಿದ್ಯಾರ್ಥಿನಿ, ವ್ಯಾಪಾರಿ, ಜಿಪುಣ, ಬುದ್ಧಿವಂತ, ದಡ್ಡ ,ಪೂಜಾರಿ, ಸನ್ಯಾಸಿ, ರೋಗಿ ,ವಿಜ್ಞಾನಿ, ಸೇವಕ ಇತ್ಯಾದಿ.
0 Comments