ರೋಮನ ಸಂಖ್ಯಾ ಪದ್ಧತಿ
ರೋಮನ ಸಂಖ್ಯಾ ಪದ್ಧತಿ ಒಂದು ಪ್ರಾಚೀನ ಸಂಖ್ಯಾ ಪದ್ಧತಿ ಯಾಗಿದ್ದು, ಇದು ರೋಮನವರು ತಯಾರಿಸಿದ ಹಾಗೂ ಎಲ್ಲಾ ಜಗತ್ತಿಗೆ ಪರಿಚಯ ಮಾಡಿ ಕೊಟ್ಟಿದ ಒಂದು ಪ್ರಾಚೀನ ಸಂಖ್ಯಾ ಪದ್ಧತಿಯಾಗಿದೆ.
ರೋಮನ ಸಂಖ್ಯಾ ಪದ್ಧತಿಯಲ್ಲಿ ಒಟ್ಟು ಏಳು ಚಿಹ್ನೆಗಳನ್ನು ಬಳಸಲಾಗುವುದು. ಈ ಏಳು ಚಿಹ್ನೆಗಳನ್ನು ಬಳಸಿ ನಾವು ಯಾವುದೇ ಸಂಖ್ಯೆಯನ್ನು ಬರೆಯಬಹುದು.
ಈ ಪದ್ಧತಿಯಲ್ಲಿ ಬಳಸಲಾಗುವ ಏಳು ಚಿಹ್ನೆಗಳು ಹಾಗೂ ಅದರ ಬೆಲೆ ಕೆಳಗಿನಂತೆ.
1) I -- 1
2) V -- 5
3) X -- 10
4) L -- 50
5) C -- 100
6) D -- 500
7) M -- 1000
ರೋಮನ ಸಂಖ್ಯೆಗಳನ್ನು ಬರೆಯುವ ನಿಯಮಗಳು.
1) ಈ ಪದ್ಧತಿಯಲ್ಲಿ ಒಟ್ಟು ಏಳು ಚಿಹ್ನೆಗಳನ್ನು ಬಳಸಲಾಗುವುದು
ಉದಾಹರಣೆಗಳು
I,V,X,L,C,D,M.
2).ಒಂದು ದೊಡ್ಡ ಸಂಖ್ಯೆಯ ಚಿಹ್ನೆಯ ಮುಂದೆ ಒಂದು ಸಣ್ಣ ಸಂಖ್ಯೆಯ ಅಥವಾ ಅದೆ ಸಂಖ್ಯೆಯ ಚಿಹ್ನೆಯನ್ನು ಬರೆದಾಗ ಅದನ್ನು ಸಂಕಲನ ಮಾಡಿ (ಕೂಡಿಸಿ) ಓದಬೇಕು.
ಉದಾಹರಣೆಗಳು
VI - 5+1=6
XII - 10+2=12
XXV - 10+10+5
LX. -- 50+10
3). ಒಂದು ದೊಡ್ಡ ಸಂಖ್ಯೆಯ ಹಿಂದೆ ಒಂದು ಸಣ್ಣ ಸಂಖ್ಯೆಯ ಚಿಹ್ನೆ ಬರೆದಾಗ ಅದನ್ನು ದೊಡ್ಡ ಸಂಖ್ಯೆಯಿಂದ ವ್ಯವಕಲನ ಮಾಡಿ ಓದಬೇಕು.
IV = 5-1=4
IX = 10-1=9
CM. =1000-100=900
CD=500-100=400
4) ಈ ಪದ್ಧತಿಯಲ್ಲಿ ಸೊನ್ನೆ ಯನ್ನು (0) ಬಳಸಲಾರದು.
5) ಒಂದು ಚಿನ್ನೆಯನ್ನು ಒಂದೇ ಸಲ ಮೂರು ಬಾರಿ ಬಳಸಬಹುದು ಮೂರುಕ್ಕಿಂತ ಹೆಚ್ಚು ಬಾರಿ ಒಂದೇ ಚಿನ್ನೆಯನ್ನು ಬಳಸಬಾರದು.
III =3 (ಸರಿ)
IIII = (ತಪ್ಪು)
6) ಮೂರು ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಗಳನ್ನು ಬರೆಯಲು ಆ ಸಂಖ್ಯೆಯ ಚಿಹ್ನೆ ಬರೆದು ಅದರ ಮೇಲೆ ಗೆರೆಯನ್ನು ಎಳೆದರೆ ಅದರ ಬೆಲೆ ಅಷ್ಟು ಸಾವಿರ ಎಂದು ಪರಿಗಣಿಸಬೇಕು.
ಈ ಮೇಲಿನ ಮಾಹಿತಿಯನ್ನು ಅಭ್ಯಾಸ ಮಾಡಿ ಕೆಳಗೆ ಕೊಟ್ಟಿರುವ ಪ್ರಶ್ನೆಗಳನ್ನು ಬಿಡಿಸಿ
ಕೆಳಗಿನ ಸಂಖ್ಯೆಗಳನ್ನು ರೋಮನ್ ಸಂಖೆಯಗಳಲ್ಲಿ ಬರೆಯಿರಿ.
520
3274
4396
234
6893
4256
8492
2947
9374
6657
0 Comments