ಸಂಸ್ಕೃತ ಸಂಧಿ ವಿಧಗಳು
ಸಂಸ್ಕೃತ ಸಂಧಿಗಳು
ಕನ್ನಡ ಭಾಷೆಯಲ್ಲಿ ಅನೇಕ ಸಂಸ್ಕೃತ ಶಬ್ದಗಳು ಇವೆ. ಎರಡು ಸಂಸ್ಕೃತ ಶಬ್ದಗಳು ಸೇರಿ ಸಂಧಿ ಆದರೆ ಅದು ಸಂಸ್ಕೃತ ಸಂಧಿ ಎನ್ನುವುದು.
ಉದಾಹರಣೆಗೆ:
ಶುಭೋದಯ =ಶುಭ+ಉದಯ
ಈ ಮೇಲಿನ ಉದಾಹರಣೆ- ಯಲ್ಲಿ ಶುಭ ಮತ್ತು ಉದಯ ಎರಡು ಸಂಸ್ಕೃತ ಪದಗಳಾ- ಗಿವೆ. ಅದಕ್ಕೆ ಈ ರೀತಿ ಎರಡು ಸಂಸ್ಕೃತ ಪದಗಳು ಸೇರಿ ಸಂಧಿಯಾಗುವುದಕ್ಕೆ ಸಂಸ್ಕೃತ ಸಂಧಿ ಎನ್ನುತ್ತಾರೆ.
ಕನ್ನಡ ಸಂಧಿಗಳಲ್ಲಿರುವಂತೆ ಸಂಸ್ಕೃತ ಸಂಧಿಗಳಲ್ಲಿಯೂ ಸ್ವರ ಸಂಧಿಗಳು, ವ್ಯಂಜನ ಸಂಧಿಗಳು ಮತ್ತು ವಿಸರ್ಗ ಸಂಧಿಗಳು ಎಂದು ಮೂರು ವಿಧಗಳಿವೆ.
ಸಂಸ್ಕೃತ ಸ್ವರ ಸಂಧಿಗಳು
1.ಸವರ್ಣದೀರ್ಘಸಂಧಿ
2.ಗುಣ ಸಂಧಿ
3.ವೃದ್ಧಿ ಸಂಧಿ
4.ಯಣ್ ಸಂಧಿ
ಸಂಸ್ಕೃತ ವ್ಯಂಜನ ಸಂಧಿಗಳು
1.ಜಸ್ತ್ವ ಸಂಧಿ
2.ಶ್ಚುತ್ವ ಸಂಧಿ
3.ಅನುನಾಸಿಕ ಸಂಧಿ
4.ಷ್ಛುತ್ವ ಸಂಧಿ
5.ಛತ್ವ ಸಂಧಿ
6.ಪರಸವರ್ಣಸಂಧಿ
ಸಂಸ್ಕೃತ ಸ್ವರ ಸಂಧಿಗಳು
1.ಸವರ್ಣದೀರ್ಘಸಂಧಿ
ಒಂದೇ ಜಾತಿಯ ಎರಡು ಸ್ವರಗಳು (ಸವರ್ಣ ಸ್ವರಗಳು) ಒಂದರ ಮುಂದೆ ಒಂದ ಬಂದು ಅವೆರಡರ ಸ್ಥಾನದಲ್ಲಿ ಅದೇ ಜಾತಿಯ ದೀರ್ಘಸ್ವರ ಬರುವದಕ್ಕೆ ಸವರ್ಣ ದೀರ್ಘ ಸಂಧಿ ಎನ್ನುತ್ತಾರೆ.
ಸವರ್ಣ ಸ್ವರಗಳು:
(ಅ,ಅ)(ಅ, ಆ)(ಆ,ಆ) = ಆ
(ಇ,ಇ)(ಇ, ಈ)(ಈ, ಈ)= ಈ
(ಉ,ಉ)(ಉ,ಊ)
(ಊ, ಊ)= ಊ
(ಎ,ಎ)(ಎ,ಏ) (ಏ,ಏ) = ಏ
(ಒ, ಒ)(ಒ, ಓ) (ಓ, ಓ) = ಓ
ಉದಾಹರೆಗಳು :
1.ಸುರ + ಅಸುರ = ಸುರಾಸುರ
ಅ + ಅ = ಆ
2.ದೇವ+ಆಲಯ= ದೇವಾಲಯ
ಅ + ಆ = ಆ
3.ಗಿರಿ + ಈಶ = ಗಿರೀಶ
ಇ + ಈ = ಈ
4.ಗುರು+ಉಪದೇಶ= ಗುರೂಪದೇಶ
ಉ + ಉ = ಊ
✨✨✨✨✨✨✨✨✨
2.ಗುಣ ಸಂಧಿ
ಗುಣ ಸಂಧಿ ನಿಯಮಗಳು
ಎರಡು ಸಂಸ್ಕೃತ ಪದಗಳ ನಡುವೆ ಸಂಧಿಯಾಗುವಾಗ
ನಿಯಮ 1.
ಪೂರ್ವ ಪದದ ಕಡೆಯಲ್ಲಿರುವ ಅ , ಆ ಕಾರಗಳ ಮುಂದೆ ಉತ್ತರ ಪದದ ಪ್ರಾರಂಭದಲ್ಲಿ ಇ, ಈ ಕಾರವು ಬಂದರೆ
'ಏ' ಕಾರವೂ ಬರುತ್ತದೆ.
1.ಗಣ + ಈಶ = ಗಣೇಶ
ಅ + ಈ = ಏ
2.ಸುರ + ಇಂದ್ರ = ಸುರೇಂದ್ರ
ಅ + ಇ = ಏ
ನಿಯಮ 2
ಪೂರ್ವ ಪದದ ಕಡೆಯಲ್ಲಿರುವ ಅ , ಆ ಕಾರಗಳ ಮುಂದೆ ಉತ್ತರ ಪದದ ಪ್ರಾರಂಭದಲ್ಲಿ ಉ,ಊ ಕಾರಗಳು ಬಂದರೆ 'ಓ' ಕಾರವು ಬರುತ್ತದೆ.
ಉದಾಹರೆಗಾಗಿ:
1.ಚಂದ್ರ+ಉದಯ= ಚಂದ್ರೋದಯ
ಅ + ಉ = ಓ
2.ಸೂರ್ಯ+ಉದಯ= ಸೂರ್ಯೋದಯ
ಅ + ಉ = ಓ
ನಿಯಮ 3.
ಉದಾಹರೆಗಾಗಿ:
1.ಮಹಾ + ಋಷಿ = ಮಹರ್ಷಿ
ಆ + ಋ = ಅರ್
2.ಸಪ್ತ + ಋಷಿ = ಮಹರ್ಷಿ
ಅ + ಋ = ಅರ್
ಎರಡು ಸಂಸ್ಕೃತ ಪದಗಳ ನಡುವೆ ಸಂಧಿಯಾಗುವಾಗ
1.ಪೂರ್ವ ಪದದ ಕಡೆಯಲ್ಲಿರುವ ಅ , ಆ ಕಾರಗಳ ಮುಂದೆ ಉತ್ತರ ಪದದ ಪ್ರಾರಂಭದಲ್ಲಿ ಇ, ಈ ಕಾರವು ಬಂದರೆ
2.ಪೂರ್ವ ಪದದ ಕಡೆಯಲ್ಲಿರುವ ಅ , ಆ ಕಾರಗಳ ಮುಂದೆ ಉತ್ತರ ಪದದ ಪ್ರಾರಂಭದಲ್ಲಿ ಉ,ಊ ಕಾರಗಳು ಬಂದರೆ 'ಓ' ಕಾರವು ಬಂದರೆ.
3.ಪೂರ್ವ ಪದದ ಕಡೆಯಲ್ಲಿರುವ ಅ , ಆ ಕಾರಗಳ ಮುಂದೆ ಉತ್ತರ ಪದದ ಪ್ರಾರಂಭದಲ್ಲಿ ಋ ಕಾರವು ಬಂದರೆ ಇದಕ್ಕೆ ಗುಣ ಸಂಧಿ ಎಂದು ಹೆಸರು.
✨✨✨✨✨✨✨✨✨
3.ವೃದ್ಧಿ ಸಂಧಿ
ವೃದ್ಧಿ ಸಂಧಿ ನಿಯಮಗಳು
ನಿಯಮ 1.
ಪೂರ್ವ ಪದದ ಕೊನೆಯಲ್ಲಿರುವ ಅ , ಆ ಕಾರಗಳ ಮುಂದೆ ಎ, ಏ, ಐ ಕಾರಗಳು ಬಂದರೆ ಐ ಕಾರವೂ ಆದೇಶವಾಗಿ ಬರುತ್ತದೆ.
1.ಏಕ + ಏಕ = ಏಕೈಕ
ಅ + ಏ = ಐ
2.ಜನ + ಐಕ್ಯ = ಏಕೈಕ
ಅ + ಐ = ಐ
ನಿಯಮ 2.
ಪೂರ್ವ ಪದದ ಕೊನೆಯಲ್ಲಿರುವ ಅ , ಆ ಕಾರಗಳ ಮುಂದೆ ಓ, ಔ ಕಾರಗಳು ಬಂದರೆ 'ಔ' ಕಾರವೂ ಆದೇಶವಾಗಿ ಬರುತ್ತದೆ.
ಉದಾಹರೆಗಾಗಿ:
1.ಜಲ + ಓಘ = ಜಲೌಘ
ಅ + ಓ = ಔ
2.ವನ + ಔಷಧಿ = ವನೌಷಧಿ
ಅ + ಔ = ಔ
ಪೂರ್ವ ಪದದ ಕೊನೆಯಲ್ಲಿ- ರುವ ಅ , ಆ ಕಾರಗಳ ಮುಂದೆ ಎ, ಏ, ಐ ಕಾರಗಳು ಬಂದರೆ ಐ ಕಾರವೂ , ಅ , ಆ ಕಾರಗಳ ಮುಂದೆ ಓ, ಔ ಕಾರಗಳು ಬಂದರೆ 'ಔ' ಕಾರವೂ ಆದೇಶವಾಗಿ
ಬರುತ್ತದೆ. ಇದಕ್ಕೆ ವೃದ್ಧಿ ಸಂಧಿ ಎನ್ನುತ್ತಾರೆ.
✨✨✨✨✨✨✨✨✨
4.ಯಣ್ ಸಂಧಿ
ಇ, ಈ, ಉ,ಊ, ಋ ಕಾರಗಳಿಗೆ ಅ - ಸವರ್ಣ ಸ್ವರಗಳು (ಸವರ್ಣವಿಲ್ಲದ ಸ್ವರಗಳು/ ಬೇರೆ ಜಾತಿಯ ಸ್ವರ) ಪರವಾದರೆ ಇ, ಈ ಕಾರಗಳಿಗೆ 'ಯ' ಕಾರವೂ, ಉ, ಊ ಕಾರಗಳಿಗೆ ವ ಕಾರವೂ, ಋ ಕಾರಕ್ಕೆ ರ್ ( ರೇಫವೂ) ಕಾರವೂ ಆದೇಶವಾಗಿ ಬರುವುದಕ್ಕೆ ಯಣ್ ಸಂಧಿ ಎನ್ನುವುದು.
ಇ, ಈ + ಸವರ್ಣವಲ್ಲದ = ಯ್
ಉ,ಊ + ಸ್ವರ = ವ್
ಋ + (ಬೇರೆ ಜಾತಿಯ = ರ್
ಸ್ವರ)
ಉದಾಹರೆಗಾಗಿ:
1.ಅತಿ + ಅಂತ್ಯ = ಅತ್ಯಂತ
ಇ + ಅ = ಯ್
2.ಪ್ರತಿ + ಉತ್ತರ = ಪ್ರತ್ಯುತ್ತರ
ಇ + ಉ = ಯ್
3.ಗುರು + ಆಜ್ಞೆ = ಗುರ್ವಾಜ್ಞೆ
ಉ + ಆ = ವ್
4.ಪಿತೃ + ಆಜ್ಞೆ = ಪಿತ್ರಾಜ್ಞೆ
ಋ + ಆ = ರ್
✨✨✨✨✨✨✨✨✨
0 Comments