ವಾಕ್ಯ ಎಂದರೇನು?
ಪೂರ್ಣ ಅರ್ಥವನ್ನು ಕೊಡುವ ಪದಗಳ ಸಮೂಹಕ್ಕೆ ವಾಕ್ಯ ಏನುತ್ತಾರೆ.
ಉದಾಹರಣೆ
1.ಅವನು ಶಾಲೆಗೆ ಬಂದನು.
2.ಅವನು ಆಡಿದನು.
3.ಅವಳ ಹೆಸರೇನು?
4.ನನ್ನ ವಹಿ ಕೊಡು.
ಮೇಲೆ ಕೊಟ್ಟಿರುವ ಉದಾಹರಣೆಗಳಲ್ಲಿ ಪ್ರತಿಯೊಂದು ವಾಕ್ಯದಲ್ಲಿ ಒಂದಕ್ಕಿಂತ ಹೆಚ್ಚು ಪದಗಳು ಸೇರಿ ಅವು ನಮಗೆ ಒಂದು ಪೂರ್ಣ ಅರ್ಥವನ್ನು ಕೊಡುತ್ತೇವೆ. ಅದಕ್ಕೆ ಈ ಮೇಲಿನ ಎಲ್ಲ ಉದಾಹರಣೆಗಳು ವಾಕ್ಯಗಳಾಗುತ್ತವೆ.
ವಾಕ್ಯಗಳಲ್ಲಿ ಬರುವ ಪದಗಳ ರಚನೆಯು
ಕರ್ತೃಪದ + ಕರ್ಮಪದ + ಕ್ರಿಯಾಪದ
ಈ ಕ್ರಮಗಳಲ್ಲಿರುತ್ತದೆ.
ಮಹೇಶನು ಪಾತ್ರೆಗಳನ್ನು ಮಾರಿದನು.
ಈ ಮೇಲಿನ ವಾಕ್ಯದಲ್ಲಿ ಮಹೇಶನು ಈ ಪದವು ಕರ್ತೃಪದವಾಗಿರುತ್ತದೆ.
ಪಾತ್ರೆಗಳನ್ನು ಕರ್ಮಪದವಾಗಿರುತ್ತದೆ.
ಮಾರಿದನು ಈ ಪದವು ಆ ವಾಕ್ಯದಲ್ಲಿನ ಕೆಲಸವನ್ನು ಅಥವಾ ಕ್ರಿಯೆಯನ್ನು ಸೂಚಿಸುತ್ತದೆ ಅದಕ್ಕೆ ಇದು ಕ್ರಿಯಾಪದವಾಗಿರುತ್ತದೆ.
ಕೆಲವೊಂದು ವಾಕ್ಯಗಳಲ್ಲಿ ಕರ್ತೃಪದ ಮತ್ತು ಕ್ರಿಯಾಪದ ಅಷ್ಟೇ ಇರುತ್ತದೆ. ಅಲ್ಲಿ ಆಕರ್ಮಕ ಕ್ರಿಯಾಪದಗಳನ್ನು ಬಳಸಿರುತ್ತಾರೆ.
ರಮೇಶ್ ಹಾಡುತ್ತಾನೆ.
ಕರ್ತೃಪದ + ಕ್ರಿಯಾಪದ
ಸತೀಶ್ ಓಡಿದನು.
ಮಕ್ಕಳು ಓದುವರು.
ಈ ಮೇಲಿನ ವಾಕ್ಯಗಳಲ್ಲಿ ಕರ್ಮಪದ ಇಲ್ಲ.
ವಾಕ್ಯಗಳ ವಿಧಗಳು
ರಚನೆಯ ಆಧಾರದ ಮೇಲೆ ಹಾಗೂ ಅರ್ಥದ ದೃಷ್ಟಿಯಿಂದ ವಾಕ್ಯಗಳನ್ನು ಬೇರೆ ಬೇರೆ ವಿಧಗಳಲ್ಲಿ ವಿಂಗಡಿಸಲಾಗಿದೆ.
ರಚನೆಯ ದೃಷ್ಟಿಯಿಂದ ವಾಕ್ಯಗಳಲ್ಲಿ ಸಾಮಾನ್ಯವಾಗಿ.
1.ಸರಳ ವಾಕ್ಯ
2. ಸಂಯೋಜಿತ ವಾಕ್ಯ
3. ಮಿಶ್ರವಾಕ್ಯ
ಎಂದು ಮೂರು ವಿಧಗಳಿವೆ.
1.ಸಾಮಾನ್ಯ ವಾಕ್ಯ ಅಥವಾ ಸರಳ ವಾಕ್ಯ
ಪೂರ್ಣ ಕ್ರಿಯಾಪದವನ್ನು ಹೊಂದಿರುವ ಸ್ವತಂತ್ರ ವಾಕ್ಯವನ್ನು ಸಾಮಾನ್ಯ ವಾಕ್ಯ ಅಥವಾ ಸರಳ ವಾಕ್ಯ ಎನ್ನುತ್ತಾರೆ.
ಉದಾಹರಣೆ :-
1.ರೈತರು ಕಾಳುಗಳನ್ನು ಬಿತ್ತಿದರು.
2.ಆಧ್ಯಾಪಕರು ಪಾಠ ಕಲಿಸುತ್ತಾರೆ.
3 ಸಾಲುಮರದ ತಿಮ್ಮಕ್ಕ ಮರಗಳನ್ನು ಬೆಳೆಸಿದರು.
ಈ ಮೇಲಿನ ಉದಾಹರಣೆಗಳಲ್ಲಿ ಒಂದೇ ಒಂದು ಕ್ರಿಯಾಪದ ಬಂದು ಅದು ಸ್ವತಂತ್ರವಾಗಿ ಅರ್ಥವನ್ನು ಕೊಡುತ್ತದೆ.
2.ಸಂಯೋಜಿತ ಅಥವಾ ಸಂಯುಕ್ತ ವಾಕ್ಯ
ಅನೇಕ ಉಪವಾಕ್ಯಗಳು ಸೇರಿ ಒಂದು ವಾಕ್ಯವಾಗಿದ್ದಾರೆ ಅದನ್ನು ಸಂಯೋಜಿತ ವಾಕ್ಯ ಅಥವಾ ಸಂಯುಕ್ತ ವಾಕ್ಯ ಎನ್ನುತ್ತಾರೆ.
ಸಂಯುಕ್ತ ವಾಕ್ಯಗಳಲ್ಲಿ ಉಪವಾಕ್ಯಗಳನ್ನು ಸಂಯೋಜಿಸಲು ಅರ್ಧವಿರಾಮ(;) ಹಾಗೂ ,ಆದರೆ,ಮತ್ತು,ಅದ್ದರಿಂದ,ಅಥವಾ ಮುಂತಾದ ಪದಗಳನ್ನು ಬಳಸಿರುತ್ತಾರೆ.
ಉದಾಹರಣೆ :-
1.ಈ ವರ್ಷ ಬಹಳ ಮಳೆಯಾಯಿತು; ಆದರೆ ಕುಡಿಯಲು ನೀರಿಲ್ಲ.
2.ಅವನು ತಮ್ಮ ಜೀವನದಲ್ಲಿ ಬಹಳ ದುಡಿದನು ಆದರೆ ಅವನಿಗೆ ಯಶಸ್ಸು ಸಿಗಲಿಲ್ಲ.
3.ನೀವು ಪುಸ್ತಕಗಳನ್ನು ಓದಿ ಅದರ ಬಗ್ಗೆ ಮಾಹಿತಿ ಬರೆಯಬಹುದು.
4.ಅವನು ದಿನಾಲು ಅಭ್ಯಾಸ ಮಾಡುತ್ತಿದ್ದ ಅದ್ದರಿಂದ ಅವನಿಗೆ ಬಹುಮಾನ ಸಿಕ್ಕಿತ್ತು.
5.ನೀವು ಚಹಾ ಅಥವಾ ಕಾಫಿಯನ್ನು ಕುಡಿಯಬಹುದು.
ಈ ಮೇಲಿನ ಉದಾಹರಣೆಗಳಲ್ಲಿ ಎರಡು ಅಥವಾ ಎರಡುಕ್ಕಿಂತ ಹೆಚ್ಚು ಕ್ರಿಯಾಪದಗಳು ಬಂದು ಆ ಉಪ ವಾಕ್ಯಗಳನ್ನು ಜೋಡಿಸಲು ಸಂಯೋಜಕ ಪದಗಳನ್ನು ಬಳಸಿರುತ್ತಾರೆ.
3.ಮಿಶ್ರವಾಕ್ಯ
ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದರೆ ಅಂತಹ ವಾಕ್ಯವನ್ನು ಮಿಶ್ರ ವಾಕ್ಯ ಎನ್ನುತ್ತಾರೆ.
ಉದಾಹರಣೆ :-
1.ಅವನಿಯು ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಳೆಂದು ಗುರುಗಳು ತಿಳಿಸಿದರು.
ಈ ಉದಾಹರಣೆಯಲ್ಲಿ ಗುರುಗಳು ತಿಳಿಸಿದರು ಇದು ಪ್ರಧಾನ ವಾಕ್ಯವಾಗಿದ್ದು ಅವನಿಯು ಪ್ರಥಮ ಸ್ಥಾನ ಪಡೆದಳು ಇದು ಉಪವಾಕ್ಯವಾಗಿರುತ್ತದೆ.
2.ನನ್ನ ತಂದೆಯವರು ಪ್ರವಾಸಕ್ಕೆ ಹೋದರೆಂದು ಅಮ್ಮ ಹೇಳಿದಳು.
3.ಭಾರತವನ್ನು ಸ್ವತಂತ್ರವಾದ ದೇಶವನ್ನಾಗಿ ಮಾಡಲು ಹಲವಾರು ಭಾರತೀಯರು ಹೋರಾಟ ಮಾಡುತ್ತಿದ್ದರು.
4.ಪ್ರತಿಯೊಬ್ಬರು ದಸರಾ ರಜೆ ಅಭ್ಯಾಸ ಪೂರ್ಣಗೊಳಿಸಬೇಕೆಂದು ಶಿಕ್ಷಕರು ಹೇಳಿದರು.
5.ಅಪಘಾತದ ಸುದ್ದಿ ಕೇಳಿ ಮನಸ್ಸಿಗೆ ದುಃಖವಾಯಿತು.
ಮಿಶ್ರ ವಾಕ್ಯಗಳಲ್ಲಿ ಎರಡು ಅಥವಾ ಅನೇಕ ಉಪವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನರಾಗಿರುತ್ತಾರೆ.
ಈ ಮೇಲಿನ ವಾಕ್ಯಗಳನ್ನು ಗುರುತಿಸುವುದು ಹೇಗೆ?
ಸಾಮಾನ್ಯ ಅಥವಾ ಸರಳ ವಾಕ್ಯಗಳಲ್ಲಿ ಒಂದೇ ಒಂದು ಕ್ರಿಯಾಪದ ಬಂದಿರುತ್ತದೆ.
ಸಂಯುಕ್ತ ವಾಕ್ಯಗಳಲ್ಲಿ ಎರಡು ಅಥವಾ ಅನೇಕ ಕ್ರಿಯಾಪದಗಳು ಬಂದು ಆ ಉಪವಾಕ್ಯಗಳನ್ನು ಜೋಡಿಸಲು ಅಥವಾ, ಮತ್ತು, ಆದರೆ, ಅದ್ದರಿಂದ, ಹಾಗೂ ಮುಂತಾದ ಪದಗಳನ್ನು ಬಳಸಿರುತ್ತಾರೆ.
ಮಿಶ್ರ ವಾಕ್ಯಗಳಲ್ಲಿ ಒಂದು ಪ್ರಧಾನ ವಾಕ್ಯಕ್ಕೆ ಒಂದು ಅಥವಾ ಅನೇಕ ವಾಕ್ಯಗಳು ಅಧೀನರಾಗಿರುತ್ತಾರೆ ಆದರೆ ಯಾವುದೇ ಸಂಯೋಜಿಸುವ ಪದಗಳನ್ನು ಬಳಸಿರುವುದಿಲ್ಲ.
ಈ ಮೇಲೆ ತಿಳಿಸಿದ ಸರಳ ವಾಕ್ಯ, ಸಯುಕ್ತ ವಾಕ್ಯ ಹಾಗೂ ಮಿಶ್ರವಾಕ್ಯ ಇವು ವಾಕ್ಯಗಳ ರಚನೆಯ ದೃಷ್ಟಿಯಿಂದ ಮಾಡಲಾಗಿರುವ ವಿಧಗಳಾಗಿವೆ.
ವಾಕ್ಯದ ಅರ್ಥದ ದೃಷ್ಟಿಯಿಂದ ಆಗುವ ವಿಧಗಳು ಮುಂದಿನ ಭಾಗದಲ್ಲಿ ಕಲಿಯೋಣ.
For More....
ಸಂಧಿ ಎಂದರೇನು? ಕನ್ನಡ ಸಂಧಿಗಳು ಎಷ್ಟು?
ರೂಢನಾಮ, ಅಂಕಿತನಾಮ , ಅನ್ವರ್ಥನಾಮ ಎಂದರೇನು?
ಕನ್ನಡ ವರ್ಣಮಾಲೆಯಲ್ಲಿ ವರ್ಣಗಳೇಷ್ಟು?
0 Comments